ನಾನು PUC ಮೂಗಿಸಿ, collegeಎಂಬ ಹೊಸ ಲೋಕಕ್ಕೆ ಕಾಲಿರಿಸಿದ ದಿನಗಳು.
ಬಾವಿಯೊಳಗಿನ ಕಪ್ಪೆಯೊಂದು ಹೊರ ಜಗತ್ತಿನ ಬೆಳಕಿಗೆ ಬಂದಾಗ, ಏನೋ ಒಂದು ತರಹದ ಕಸಿವಿಸಿ ಮೂಡಿದ ದಿನಗಳು.
ಏಕಾಂತವಾಗಿ ನನ್ನದೆಂಬ ಜಗತ್ತಿನಲ್ಲಿ ಸಂತೋಷದ ದಿನಗಳು.
ಮೂಡಿತು ಹೊಸ ಯೋಚನೆಗಳು, ಬೆಳಯಿತು ಸ್ನೇಹಿತರ ಬಳಗ.
ಮುಂದಿನ ಬೆಂಚಿನ ಮುದ್ದಿನ student ಎಂಬ ಹೆಗ್ಗಳಿಕೆ.
ಎಲ್ಲೋ ನನ್ನನ್ನೇ ನಾನು ಮರೆತು ಹೋದೆನೇ ಎಂಬ ಆತಂಕ.
ಓದಿನ ಜೊತೆಗೆ ಕಲೆ, ನಾಟಕ, Dance, ಸಂಗೀತದ ಒಡನಾಟ.
ಗೊತ್ತು ಗುರಿಯೀಲ್ಲ ದೇ, ಹಾರಾಡಿದ ದಿನಗಳು.
ಪ್ರೀತಿಯೆಂಬ ಸುಳಿಯಲ್ಲಿ ಮುಳುಗಿದ ಕನಸುಗಳು.
ವಸ್ತ್ವನ್ನು ಅರಿಯದ, ಕನಸೆಂಬ ಕಾಡಿನಲ್ಲಿ ಕಳೆದು ಹೋದ ದಿನಗಳು.
ಕೋಪ ತಾಪದ ಜೊತೆಗೆ ಪ್ರೀತಿಯೆಂಬ ಕನಸಿನ ಹುಡುಕಾಟ.
ಮನಸಿನ ಮದುರ ಭಾವನೆಯ ಜೊತೆಗಾಗಿ ಹುಚ್ಚು ಮನಸಿನ ಅಲೆದಾಟ.
ಗುರಿಯಜೋತೆಗೆ ಕೆಲಸದ ಹುಡುಕಾಟ.
ಕೆಲಸದಲ್ಲಿ ತೃಪ್ತಿ ಕಾಣದ ಜೀವ, ಬಟ್ಟೆಯಂತೆ ಕೆಲಸಗಳ ಬದಲಾವಣೆ.
ಕೊನೆಯ ಭೇಟಿ, ಕೊನೆಯ ಕಾಲೇಜು ದಿನ, ಮೊದಲ ಕೆಲಸ, ಮೊದಲ ಸಂಬಳ, ಮೊದಲ ಬೈಕು......ಅಜ್ಜಿಯಾ ಕೊನೆಯ ಕೈ ತುತ್ತು...ಎಂತ ಯಾತನಮಯ ಸಂತೋಷ.
ಪ್ರೀತಿಯೆಂಬ ಹಿತವಾದ ಹೃದಯದ ಬಾಷೆಯ ಕಲಿಯುವ ಮನದ ಆತುರ.
ಸ್ನೇಹಿತರ ಹಿತವಚನಗಳ ಗೊಂದಲ, ಕಳೆದು ಕೊಳ್ಳುವೇನೋ ನನ್ನ ಪ್ರೀತಿಯೆಂಬ ಎಂಬ ಗೊಂದಲ.
ಆದರು ಜೀವನದಲ್ಲಿ HOPES ಎಂಬ ನೌಕೆಯಲ್ಲಿ ತೆವಳುವ ಆಸೆಯೊಂದಿಗೆ ಗುರಿಯ ಸೇರುವೆಡೆಗೆ...
ನವಿರಾದ ಭಾವನೆಗಳೊಂದಿಗೆ ಬದುಕುವಾಸೆಯಾ ಹೊತ್ತ......... ಹರ್ಶ